ತಿರು ಶ್ರೀನಿವಾಸಾಚಾರ್ಯರು ಹೊಸಗನ್ನಡ ವ್ಯಾಕರಣದ ಆದ್ಯ ಗ್ರಂಥಕರ್ತರಲ್ಲೊಬ್ಬರಾಗಿದ್ದರು. ಪ್ರೌಢಶಾಲಾ ಕನ್ನಡ ವ್ಯಾಕರಣ, ಸಂಸ್ಕೃತಿ ಪ್ರದೀಪ ಮುಂತಾದ ಕೃತಿಗಳನ್ನು ರಚಿಸಿದ್ದರು. ಮಧುಗಿರಿ, ಹಾಸನ, ಆಯನೂರು, ಮೈಸೂರು ಮುಂತಾದೆಡೆಗಳಲ್ಲಿ ಇವರು ಪ್ರೌಢಶಾಲಾ ಕನ್ನಡ ಪಂಡಿತರಾಗಿ ಕೆಲಸಮಾಡಿದ್ದರು. ಇವರ ತಂದೆ ಶ್ರೀನಿವಾಸರಂಗಾಚಾರ್ಯರು ಕೂಡ ಲೇಖಕರಾಗಿದ್ದರು.